ಭವಿಷ್ಯ

ಡಿಸೆಂಬರ್ 18 : ನಿತ್ಯ ಭವಿಷ್ಯ ಮತ್ತೆ ಪಂಚಾಂಗ

ಸೋಮವಾರ, ೧೮ ಡಿಸೆಂಬರ್ ೨೦೧೭
ಸೂರ್ಯೋದಯ : ೦೬:೩೯
ಸೂರ್ಯಾಸ್ತ : ೧೭:೫೩
ಶಕ ಸಂವತ : ೧೯೩೯ ಹೇವಿಲಂಬಿ
ಅಮಂತ ತಿಂಗಳು : ಮಾರ್ಗಶಿರ
ಪಕ್ಷ : ಕೃಷ್ಣ ಪಕ್ಷ
ತಿಥಿ : ಅಮಾವಾಸ್ಯೆ
ನಕ್ಷತ್ರ : ಜ್ಯೆಷ್ಟ್ಯ
ಯೋಗ : ಗಂಡ
ಪ್ರಥಮ ಕರಣ : ನಾಗವ
ಸೂರ್ಯ ರಾಶಿ : ಧನು
ಅಭಿಜಿತ್ ಮುಹುರ್ತ : ೧೧:೫೩ – ೧೨:೩೮
ಅಮೃತಕಾಲ : ೨೬:೫೭+ – ೨೮:೪೫+

ರಾಹು ಕಾಲ: ೦೮:೦೩ – ೦೯:೨೭
ಗುಳಿಕ ಕಾಲ: ೧೩:೪೦ – ೧೫:೦೪
ಯಮಗಂಡ: ೧೦:೫೨ – ೧೨:೧೬

 

ಮೇಷ (Mesha)

ನಿಮ್ಮ ಕಾರ್ಯಾನುಭವ ಹಾಗೂ ಜಾಣತನ ಎಲ್ಲರ ಪ್ರಶಂಸೆಗೆ ಪಾತ್ರವಾಗಲಿದೆ. ಹಿರಿಯರ ಆರೋಗ್ಯದ ಬಗ್ಗೆ ವಿಶೇಷ ಗಮನವಿರಲಿ. ಏಕಾಂತನದಿಂದ ಹೊರ ಬರಲು ಉತ್ತಮ ಗ್ರಂಥಗಳ ಓದುವಿಕೆಯು ಸಹಕಾರಿಯಾಗುವುದು.

 

ವೃಷಭ (Vrushabha)

ಕೆಲಸದ ಸ್ಥಳದಲ್ಲಿ ನಿಮ್ಮ ಹೆಗಲಿಗೆ ಹೊಸದೇ ರೀತಿಯ ಜವಾಬ್ದಾರಿಗಳು ಏರಲಿವೆ. ಅಂತೆಯೇ ಸಾಕಷ್ಟು ಒತ್ತಡವೂ ಉಂಟಾಗುವ ಸಾಧ್ಯತೆ ಇದೆ. ಹಣಕಾಸಿನ ವಿಷಯದಲ್ಲಿ ನಿಷ್ಠುರತೆಯನ್ನು ತೋರದಿದ್ದಲ್ಲಿ ಮಹತ್ತರ ಸಮಸ್ಯೆಗಳಿಗೆ ಸಿಲುಕಿಕೊಳ್ಳುವಿರಿ.

 

ಮಿಥುನ (Mithuna)

ವೈಯಕ್ತಿಕ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಾಣುವಿರಿ. ನೌಕರಿ ಬದಲಾವಣೆ ಸದ್ಯಕ್ಕೆ ಬೇಡವೇ ಬೇಡ. ಪುನಃ ಪಂಚಮ ಶನಿಯ ಕಾಡಾಟಕ್ಕೆ ಒಳಗಾಗುವುದರಿಂದ ಆದಷ್ಟು ಪ್ರಮಾಣದಲ್ಲಿ ಎಚ್ಚರಿಕೆ ಅಗತ್ಯ.

 

ಕರ್ಕ (Karka)

ನಿಮ್ಮ ಮಾತಿಗೂ ಕೈಗೂ ಅಂತರವಿರದಿರಲಿ. ಗುರು ಮತ್ತು ಶನಿಗ್ರಹದ ಚಲನೆಯು ನಿಮಗೆ ಅಧಿಕ ಒತ್ತಡವನ್ನು ಇಂದು ನೀಡುವುದು. ಹಾಗಾಗಿ ಆದಷ್ಟು ತಾಳ್ಮೆಯಿಂದ ಇರಿ. ಕುಲದೇವತಾ ಪ್ರಾರ್ಥನೆ ಮಾಡಿರಿ.

 

ಸಿಂಹ (Simha)

ಎಲ್ಲವನ್ನೂ ನಿಭಾಯಿಸಬಲ್ಲೆನೆಂಬ ಅತಿಯಾದ ಆತ್ಮವಿಶ್ವಾಸ ಬೇಡ. ಮಕ್ಕಳು ತಮ್ಮ ನಡವಳಿಕೆಯಿಂದ ಹಿರಿಯರಿಗೆ ಮುಜುಗರವನ್ನುಉಂಟು ಮಾಡುವರು. ಕಾರ್ಯ ಒತ್ತಡದ ನಡುವೆಯೂ ಪರರಿಗೆ ಉಪಕಾರವನ್ನು ಮಾಡುವಿರಿ.

 

ಕನ್ಯಾರಾಶಿ (Kanya)

ನಿಮ್ಮ ಸೇವೆಯ ರೀತಿ ನೀತಿಗಳಿಂದ ಪ್ರಭಾವಿತರಾದ ಜನರು ನಿಮ್ಮನ್ನೇ ಮುಂದಿನ ಮುಖಂಡನಾಗಬೇಕೆಂದು ಪ್ರಾರ್ಥಿಸುವರು. ಇದು ಶುಭ ಸಮಾಚಾರವೇ ಆದರೂ ನಿಮ್ಮ ವೈಯಕ್ತಿಕ ಕೆಲಸ ಕಾರ್ಯಗಳನ್ನು ಮಾಡಲು ಅಡ್ಡಿ ಉಂಟಾಗುವುದು.

 

ತುಲಾ (Tula)

ಪರಿಶ್ರಮದಲ್ಲಿಯೇ ಹಿತ ಕಾಣುವ ನಿಮಗೆ ಯಶಸ್ಸು ನಿಶ್ಚಿತ ಮತ್ತು ಅದರ ಫಲವನ್ನು ಶೀಘ್ರದಲ್ಲಿಯೇ ಕಂಡುಕೊಳ್ಳುವಿರಿ. ಕೆಲವೊಮ್ಮೆ ನಿಮ್ಮ ಅತಿಯಾದ ಲೆಕ್ಕಾಚಾರ ತಲೆಕೆಳಗಾಗುವ ಸಾಧ್ಯತೆ ಇರುವುದು. ಕುಟುಂಬದಲ್ಲಿ ಒಮ್ಮತ ಮೂಡುವುದು.

 

ವೃಶ್ಚಿಕ (Vrushchika)

ಸಮಯ ಪ್ರಜ್ಞೆಯಿಂದ ವ್ಯವಹರಿಸಿ. ಸ್ನೇಹಿತರೊಂದಿಗೆ ಮೋಜು ಅನುಭವಿಸುವಿರಿ. ನಿಮ್ಮ ಕೆಲಸ ಕಾರ್ಯಗಳಲ್ಲಿ ಮಕ್ಕಳ ಸಹಾಯ ಸಹಕಾರಗಳು ಸಿಗುವುದರಿಂದ ಅಧಿಕ ಒತ್ತಡದಿಂದ ಪಾರಾಗುವಿರಿ.

 

ಧನು ರಾಶಿ (Dhanu)

ಸಮಾಜದ ಸೇವೆ ನಿಮ್ಮಿಂದ ವಿಶೇಷವಾಗಿ ನಡೆದು ಸಮಾಜದಲ್ಲಿ ಮನ್ನಣೆ ಗಳಿಸುವಿರಿ. ಅನೇಕ ಸಭೆ ಸಮಾರಂಭಗಳಲ್ಲಿ ಭಾಗವಹಿಸಬೇಕಾಗುವುದು. ಸರಕಾರದಿಂದ ಬರಬೇಕಾಗಿದ್ದ ಧನ ಸಹಾಯ ಇಷ್ಟರಲ್ಲೇ ನಿಮ್ಮ ಕೈ ಸೇರಲಿದೆ.

 

ಮಕರ (Makara)

ಅನೇಕ ಸಮಸ್ಯೆಗಳಿದ ಗೊಂದಲದ ಗೂಡಾಗಿದ್ದ ಕುಟುಂಬದಲ್ಲಿ ನೆಮ್ಮದಿ ಕಾಣಲು ಆರಂಭವಾಗಿದೆ. ಆರ್ಥಿಕ ಸಮಸ್ಯೆಗಳು ಆದಾಯದಿಂದ ಸುಧಾರಿಸಲಿವೆ. ಮಾವನ ಮನೆಯಿಂದ ಬರಲಿರುವ ಎಲ್ಲ ರೀತಿಯ ಸಹಾಯಗಳನ್ನು ಸ್ವೀಕರಿಸಿರಿ.

 

ಕುಂಭರಾಶಿ (Kumbha)

ಅನೇಕ ಸಮಸ್ಯೆಗಳಿದ ಗೊಂದಲದ ಗೂಡಾಗಿದ್ದ ಕುಟುಂಬದಲ್ಲಿ ನೆಮ್ಮದಿ ಕಾಣಲು ಆರಂಭವಾಗಿದೆ. ಆರ್ಥಿಕ ಸಮಸ್ಯೆಗಳು ಆದಾಯದಿಂದ ಸುಧಾರಿಸಲಿವೆ. ಮಾವನ ಮನೆಯಿಂದ ಬರಲಿರುವ ಎಲ್ಲ ರೀತಿಯ ಸಹಾಯಗಳನ್ನು ಸ್ವೀಕರಿಸಿರಿ.

 

ಮೀನರಾಶಿ (Meena)

ವಿವಾಹ ಅಪೇಕ್ಷೆಯುಳ್ಳವರಿಗೆ ಖಂಡಿತವಾಗಿಯೂ ಆತುರ ಸಲ್ಲದು. ಕಾದಷ್ಟು ಕಣಕರುಚಿ ಎನ್ನುವಂತೆ ಇನ್ನು ಸ್ವಲ್ಪ ದಿನ ಕಾಯುವುದರಿಂದ ಉತ್ತಮ ಜೀವನ ಸಂಗಾತಿಯು ದೊರೆಯುವರು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top