ಭವಿಷ್ಯ

ಹೇಮಲಂಬಿ ಹೊಸ ಸಂವತ್ಸರ: ಯಾವ ರಾಶಿಯವರಿಗೆ ಈ ವರ್ಷ ಹೇಗಿದೆ ಗೊತ್ತಾ?

ಹೇಮಲಂಬಿ ಸಂವತ್ಸರಕ್ಕೆ ನಾವೀಗ ಕಾಲಿಟ್ಟಿದ್ದೇವೆ. ಯಾವ್ಯಾವ ರಾಶಿಯವರಿಗೆ ಈ ಹೊಸ ವರ್ಷ ಹೇಗಿದೆ? ಇಲ್ಲಿದೆ ನೋಡಿ ಅದರ ವಿವರ

ಮೇಷ: ಗುರುಬಲ ಬರಲು ಸಮಯ ಬೇಕು. ಹೋರಾಟ ತಪ್ಪಿದ್ದಲ್ಲ. ಒಳ್ಳೆಯ ಕಾಲ ಬರುತ್ತದೆ ತಾಳ್ಮೆಯಿಂದ ಕಾಯಬೇಕು.ಅಷ್ಟಮ ಶನಿಯಿಂದ ಬಿಡುಗಡೆ ಆಗಿರುವುದರಿಂದ ದೊಡ್ಡ ಗಂಡಾಂತರದಿಂದ ಪಾರಾಗಿದ್ದೀರಿ ಎನ್ನಬಹುದು.

ವೃಷಭ: ಗುರುಬಲ ಮತ್ತು ದೈವ ಬಲ ಇರುವುದರಿಂದ ಆತಂಕ ಇಲ್ಲ. ಬೇವು-ಬೆಲ್ಲದ ತರಹ ಎಲ್ಲವೂ ಸಮನಾಗಿ ಬರಲಿದೆ. ಅಷ್ಟಮ ಶನಿ ಪ್ರಾರಂಭ ವಾಗಿದೆ.

ಮಿಥುನ: ಶನಿ ಏಳರಲ್ಲಿ, ಗುರು ನಾಲ್ಕರಲ್ಲಿ ಇರುವುದರಿಂದ ಕಷ್ಟಗಳು ಹೆಚ್ಚಾದರೂ ಮುಂದಿನ ದಿನಗಳಲ್ಲಿ ಶುಭಫಲಗಳಿವೆ. ಹಾಗಾಗಿ ಚಿಂತೆ ಮಾಡದೇ ತಾಳ್ಮೆ ವಹಿಸಿ.

ಕಟಕ: ಪಂಚಮ ಶನಿಯಿಂದ ಬಿಡುಗಡೆ ಯಾಗಿದ್ದರೂ ನಿರೀಕ್ಷಿಸಿದ ಫಲಗಳಿಗೆ ಸಮಯ ಬೇಕು. ಆರರ ಶನಿ ಜಯವನ್ನೂ ಧನವನ್ನೂ ಧೈರ್ಯವನ್ನೂ ಕೊಡುತ್ತಾನೆ.

ಸಿಂಹ: ಆರೋಗ್ಯ ಹಾಗೂ ಖರ್ಚುಗಳಲ್ಲಿ ಜಾಗ್ರತೆ ಇರಲಿ. ಪಂಚಮ ಶನಿ ಆರಂಭವಾಗಿದ್ದು, ಗುರುಬಲ ಇದೆ. ಹಣ ಬಂದರೂ ಖರ್ಚು ಅಷ್ಟೇ ಇರುತ್ತದೆ.

ಕನ್ಯಾ: ಜಾಗ್ರತೆ. ಶನಿ ನಾಲ್ಕರಲ್ಲಿ. ದುಃಖದ ಸನ್ನಿವೇಶಗಳು ಎದುರಾಗಬಹುದು. ಬಂದದ್ದನ್ನು ಸಮಚಿತ್ತದಿಂದ ಸ್ವೀಕರಿಸಿ. ಮುಂದೆ ಶುಭದಿನಗಳು ಇವೆ.

ತುಲಾ: ಸ್ಥಳ ಬದಲಾವಣೆ ಗೆ ಸೂಕ್ತಕಾಲ. ಶನಿ ಮೂರರಲ್ಲಿ ಶುಭಫಲಗಳನ್ನು ನೀಡುತ್ತಾನೆ. ಆದರೂ ಸಮಸ್ಯೆಗಳ ನಡುವೆ ಬದುಕು. ಛಲದಿಂದ ಮುಂದುವರೆಯಿರಿ.

ವೃಶ್ಚಿಕ: ಸವಾಲುಗಳು ಬಹಳ ಇವೆ. ದೊಡ್ಡ ಬದಲಾವಣೆ ಎದುರಿಸಿದ್ದರೂ ಮುಂದೆ ಬರುವ ದಿಢೀರ್‍ ಬದಲಾವಣೆಗಳಿಗೆ ಸಿದ್ಧರಾಗಿ. . ಗುರುಬಲ ಇದೆ. ನಿರ್ಧಾರಗಳನ್ನು ತೆಗೆದು ಕೊಳ್ಳುವಾಗ ಎಚ್ಚರ ಅಗತ್ಯ.

ಧನುಸ್ಸು: ಶನಿ ರಾಶಿಯಲ್ಲಿ ಗುರುಬಲ ಇಲ್ಲ. ಸಂದಿಗ್ಧ ಪರಿಸ್ಥಿತಿ. ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಸಾಕಷ್ಟು ಎಚ್ಚರ ವಹಿಸಿ. ನಿಮ್ಮ ನೆರಳೇ ಶತ್ರುವಾಗ ಬಹುದು. ಸೆಪ್ಟೆಂಬರ್‌ ನಂತರ ಶುಭಫಲಗಳಿವೆ. ಅದರ ಫಲಗಳು ಜೂನ್‍ನಿಂದ ಮುನ್ಸೂಚನೆ ದೊರೆಯಲಿದೆ.

ಮಕರ: ಸಾಡೆ ಸಾತಿ ಶನಿಯ ಪ್ರಾರಂಭದಲ್ಲಿದ್ದೀರಿ. ಬಿಸಿ ತಟ್ಟುತ್ತಿದೆ. ಹಣಕಾಸಿನ ಲೆಕ್ಕ ಸಿಗುತ್ತಿಲ್ಲ. ಅನಿರೀಕ್ಷಿತ ಖರ್ಚುಗಳು. ಆದರೂ ಗುರುಬಲ ಇದೆ. ಒಳ್ಳೆಯ ಬದಲಾವಣೆ ಇದೆ. ಶುಭಸುದ್ದಿ ಗಾಗಿ ನಿರೀಕ್ಷಿಸಿ.

ಕುಂಭ: ಹೋರಾಟಕ್ಕೆ ಜಯ ಖಚಿತ. ಅಪಾರ ಧನಲಾಭವನ್ನು ಯಶಸ್ಸನ್ನೂ ಕೊಡುತ್ತಾನೆ. ಆದರೂ ಗುರುಬಲ ಇಲ್ಲ. ಸಂಪೂರ್ಣ ಶುಭಫಲಗಳಿಗೆ ಸೆಪ್ಟೆಂಬರ್ ವರೆಗೂ ಕಾಯಬೇಕು.

ಮೀನ: ಗುರುಬಲವಿದ್ದರೂ ಆರಕ್ಕೇರದ ಮೂರಕ್ಕಿಳಿಯದ ಪರಿಸ್ಥಿತಿ. ಎಚ್ಚರಿಕೆಯಿಂದ ಮುನ್ನಡೆಯಿರಿ. ನಿರ್ಧಾರ ಗಳನ್ನು ಒಂದಲ್ಲ ಎರಡು ಬಾರಿ ಯೋಚಿಸಿ ಮಾಡಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top