ದೇವರು

ಮದುವೆ ಆಗೋಕೆ ಮುಂಚೆ ಗುಣ ಬಲ ನೋಡ್ತಾರೆ ಆಗಂದ್ರೆ ಏನು ?ಒಂದೇ ಗುಣದವರು ಮದುವೆ ಆಗಬಾರದಂತೆ !

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಮದುವೆ ಆಗೋಕೆ ಮುಂಚೆ ಗುಣ ಬಲ ನೋಡ್ತಾರೆ ಆಗಂದ್ರೆ ಏನು ?ಒಂದೇ ಗುಣದವರು ಮದುವೆ ಆಗಬಾರದಂತೆ !

ಮದುವೆಗೆ ಒಟ್ಟು 36 ಒಟ್ಟು ಗುಣಗಳು ಬೇಕು ನಿಮ್ಮ ಹಾಗು ನಿಮ್ಮ ಸಂಗಾತಿಯ ಜಾತಕ ಫಲ ಅಂದರೆ ಅವರ ಹುಟ್ಟಿದ ಸ್ಥಳ , ದಿನಾಂಕ ಹಾಗು ಸಮಯವನ್ನು ಆಧಾರಿಸಿ ಹುಟ್ಟಿದ ಗಳಿಗೆಯ ರಾಶಿ ನಕ್ಷತ್ರಗಳನ್ನು ನೋಡಿ ಜಾತಕ ಫಲವನ್ನು ತಯಾರಿಸಲಾಗುತ್ತದೆ.

ಸಾಮುದ್ರಿಕ ಶಾಸ್ತ್ರದಲ್ಲಿ ಹೆಣ್ಣು ಗಂಡಿನ ನಡುವಿನ ಅನ್ಯೋನ್ಯತೆಯನ್ನು ಅವರ ಜಾತಕ ಗುಣಗಳನ್ನು ಹೊಂದಿಸಿ ನೋಡಲಾಗುತ್ತದೆ
ಮನುಷ್ಯನ ಜೀವನ ಮೂರು ಪ್ರಮುಖ ಘಟ್ಟಗಳಾದ ಹುಟ್ಟು , ಮಕ್ಕಳು , ಸಾವು ಇವುಗಳ ಬಗೆಗಿನ ಮಾಹಿತಿಯನ್ನು ಜಾತಕವನ್ನು ನೋಡಿ ಊಹೆಮಾಡಲಾಗುತ್ತದೆ.

ಮುಖ್ಯವಾಗಿ 3 ಗುಣಗಳು ಮನುಷ್ಯನ ಗುಣ ನಡತೆಗಳನ್ನು ನಿರ್ಧರಿಸುತ್ತದೆ :

ಮನುಷ್ಯನ ಮೂರು ಗುಣಗಳನ್ನು ದೇವ (ಸತ್ತ್ವ), ಮನುಷ್ಯ (ರಜಸಿಕ), ಮತ್ತು ರಾಕ್ಷಸ (ತಾಮಸಿಕ) ಅಡಿಯಲ್ಲಿ ವರ್ಗೀಕರಿಸಲಾಗಿದೆ ಈ ಗುಣಗಳಿಗೆ ಹಲವಾರು ಅರ್ಥಗಳು ಬರುತ್ತವೆ.

ದೇವ (ಸತ್ತ್ವ) – ಸದ್ಗುಣಶೀಲ ಮತ್ತು ಸಾಮರಸ್ಯ ಗುಣವನ್ನು ಹೊಂದಿರುತ್ತಾರೆ.
ಮನುಷ್ಯ (ರಜಸಿಕ) – ಭಾವೋದ್ರೇಕ,ಸ್ವಹಿತಾಸಕ್ತಿ ,ಸ್ವಾರ್ಥಿ,ಉತ್ತಮ ಕೆಲಸ,ಉತ್ತಮ ನಡುವಳಿಕೆ,ಸ್ವಾರ್ಥಿ,ಕ್ರಿಯಾತ್ಮಕ, ಅಹಂ ಮತ್ತು ಗೊಂದಲದ ಗುಣವನ್ನು ಹೊಂದಿರುತ್ತಾರೆ.
ರಾಕ್ಷಸ (ತಾಮಸಿಕ) – ಹಿಂಸಾತ್ಮಕ, ಬಂಡಾಯ,ಅಂಧಕಾರ,ಅಸ್ತವ್ಯಸ್ತ ಮನಸ್ಸು,ದ್ವೇಷ ಸಾಧಿಸುವ , ಕಲ್ಮಶ, ದೊಂಬಿ ಗುಣವನ್ನು ಹೊಂದಿರುತ್ತಾರೆ.

ಮದುವೆಗೆ ಹೊಂದಾಣಿಕೆಯಾಗುವ ಕುಂಡಲಿಯ 36 ಗುಣಗಳಲ್ಲಿ 6 ಅಂಕಗಳನ್ನು ಈ ಗುಣಗಳಿಂದ ತೆಗೆದುಕೊಳ್ಳಲಾಗುತ್ತದೆ.

ಅತ್ಯುತ್ತಮ ಗುಣಗಳ ಹೊಂದಾಣಿಕೆ :

ಗಂಡು ಹೆಣ್ಣಿನ ಗುಣಗಳು ಒಂದೇ ಆಗಿದ್ದರೆ ಸಂಬಂಧದ ನಡುವಿನ ಸಮತೋಲನೆ ಹಾಳಾಗುತ್ತದೆ.

ದೇವ ಮತ್ತು ಮನುಷ್ಯಗುಣ :

ನಾವು ಅಂದುಕೊಂಡದ್ದಕಿಂತ ಚೆನ್ನಾಗಿ ಈ ಎರಡು ಗುಣಗಳು ಬೆರೆಯುತ್ತವೆ.
ಮನುಷ್ಯಗುಣದ ಗೊಂದಲದ ಸ್ವಭಾವವನ್ನು ದೇವಗುಣ ಸಮತೋಲನ ಮಾಡುತ್ತದೆ.ಒಬ್ಬರಿಗೊಬ್ಬರು ಕಷ್ಟಗಳಲ್ಲಿ ಅನ್ಯೋನ್ಯವಾಗಿ ಬಾಳುತ್ತಾರೆ.

ಮನುಷ್ಯ ಮತ್ತು ರಾಕ್ಷಸ ಗುಣ :

ಮನುಷ್ಯ ಗುಣದ ಉತ್ತಮ ನಡುವಳಿಕೆ ರಾಕ್ಷಸ ಗುಣದಲ್ಲಿನ ಕಲ್ಮಷಗುಣಗಳನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ, ಮನುಷ್ಯ ಗುಣದವರಿಗೆ ಏನಾದರೂ ತೊಂದರೆ ಉಂಟಾದರೆ ರಾಕ್ಷಸ ಗುಣದವರು ಕಾಪಾಡುತ್ತಾರೆ ಒಂದು ಉತ್ತಮ ಆರೋಗ್ಯಕರ ಸಂಬಂಧ ಏರ್ಪಡುತ್ತದೆ.

ದೇವ ಮತ್ತು ರಾಕ್ಷಸ ಗುಣ :

ಇಬ್ಬರು ಪರಸ್ಪರರು ಬೆಳೆಯಲು ಸಹಾಯ ಮಾಡುತ್ತಾರೆ ಪ್ರೀತಿ, ಹೃದಯತೆ ಮತ್ತು ಕಾಳಜಿಯನ್ನು ಹೊಂದಿರುತ್ತಾರೆ.
ರಾಕ್ಷಸ ಗುಣದ ಶಕ್ತಿ, ಸ್ಥಿರತೆ ಮತ್ತು ರಕ್ಷಣೆ ಇವರ ಗುಣಗಳಾಗಿದ್ದು ಇವರಿಬ್ಬರ ಮಧ್ಯೆ ಆರೋಗ್ಯಕರ ಸಂಬಂಧ ಏರ್ಪಡುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

1 Comment

1 Comment

  1. Shekhar

    March 25, 2017 at 6:55 am

    Deva mattu Deva ….manushya mattu manushya haagu rakahasa mattu rakshasa ati uttama….panchanga omme nodi swamy.

Leave a Reply

Your email address will not be published. Required fields are marked *

To Top